March 25, 2009

ಸೆರಗು ಜಾರಿದಾಗ...

ದೊಡ್ಡಾಟ ನೋಡಲು ಇಲ್ಲಿ ನೆರೆದಿರುವ ನಿಮಗೆಲ್ಲರಿಗೂ ಸ್ವಾಗತ. ಹೌದು, ಆಟ ಆರಂಭವಾಗುವುದೇ ಪರದೆ ಎತ್ತುವುದರಿಂದ. ರಂಗದ ಅಂತರಂಗ, ಅದರ ಬಣ್ಣಬಣ್ಣದ ಸೀನರಿಗಳು, ಕುಣಿಯುವ ನಟ ನಟಿಯರು, ಅವರ ಆಟ, ಮೈ ಮಾಟ ಇವೆಲ್ಲ ಕಾಣಸಿಗುವುದು ಪರದೆ ಎತ್ತಿದ ಮೇಲೇನೆ. ಅದಕ್ಕಲ್ಲವೇ ಪರದೆ ಎತ್ತುವವರೆಗೂ ಅಷ್ಟೊಂದು ಆತುರ? ಎಲ್ಲಿ, ಪರದೆ ಎತ್ತುವುದನ್ನು ಒಂದೈದು ನಿಮಿಷ ತಡ ಮಾಡಿ ನೋಡೋಣ. ಇಡೀ ಪ್ರೇಕ್ಷಕಾಂಗಣ ಶಿಳ್ಳೆ ಕೇಕೆಗಳಿಂದ ತುಂಬಿ ಹೋಗುತ್ತದೆ.

ಇದೇನು, ಸೆರಗಿನ ವಿಷಯದ ಬದಲು ಪರದೆಯ ಬಗ್ಗೆ ಮಾತಾಡುತ್ತಿದ್ದಾನೆ ಎನ್ನುತ್ತೀರೋ, ಹಾಗೇನಿಲ್ಲ. ಎರಡಕ್ಕೂ ಸಾಮ್ಯವಿದೆ. ಎರಡರ ಕೆಲಸವೂ ಮುಚ್ಚುವುದೇ (ಆಮೇಲೆ ತೆಗೆದು ತೋರುವುದೇ!). ಹಣ ಕೊಟ್ಟು ಆಟ ನೋಡಲು ಬಂದಿದ್ದೀರಿ, ಪರದೆ ಎತ್ತುವುದು ನಿಮ್ಮ ಹಕ್ಕು; ಅದೇ ಸುಮ್ಮನೇ ಸೆರಗು ಜಾರಿದರೆ ಅದು ಅಚಾನಕ್ಕು. ತೆರೆದು ತೋರಿದ್ದಕ್ಕಿಂತಾ, ತಾನೇ ಜಾರಿದರೇ ಹೆಚ್ಚು ಚಂದ. ಅದೊಂದು ಸುಂದರ ಅನಾಹುತ. ಒಪ್ಪುತ್ತೀರೋ ಇಲ್ಲವೋ, ನಿಜ ಹೇಳಿ:
  • ಬೆಳಗ್ಗೆ ಗೆಳೆಯರೊಡನೆ ವಾಕಿಂಗ್ ಹೊರಟಿದ್ದೀರಿ; ಅದೋ, ಅಲ್ಲೊಂದು ಮನೆಯ ಮುಂದೆ ಮನೆಯಾಕೆ ರಂಗೋಲಿ ಹಾಕುತ್ತಿದ್ದಾಳೆ. ರಂಗೋಲಿಯೇನೋ ಚೆನ್ನಾಗಿದೆ, ಆದರೆ ಪಾಪ ಅದರಲ್ಲಿ ಆಕೆ ಎಷ್ಟು ಮುಳುಗಿದ್ದಾಳೆಂದರೆ ಹೊದ್ದ ಸೆರಗು ಜಾರಿ ಒಳಗಿನದೆಲ್ಲಾ ಹೊರಗೆ ಕಾಣುತ್ತಿದೆ ಎಂಬ ಪರಿವೆಯೇ ಆಕೆಗಿಲ್ಲ. ಈಗ ಹೇಳಿ, ನೀವು ಕೂಡಲೆ ನಿಮ್ಮ ಗೆಳೆಯರೊಡನೆ ಜೋರಾಗಿ ಹರಟುತ್ತಾ ಆ ಸ್ಥಳವನ್ನು ದಾಟಿ ಪಾರಾಗುತ್ತೀರೋ, ಅಥವಾ ಹಾಗೂ ಹೀಗೂ ಗೆಳೆಯರನ್ನು avoid ಮಾಡಿ ಒಂದು ಹೆಜ್ಜೆ ಹಿಂದುಳಿಯುತ್ತೀರೋ?
  • ಗೆಳೆಯರೊಬ್ಬರ ಮನೆಗೆ ರಾತ್ರಿ ಊಟಕ್ಕೆ ಹೋಗಿದ್ದೀರಿ. ಮನೆಯೊಡತಿ ನಿಮಗೆ ಊಟ ಬಡಿಸುತ್ತಿದ್ದಾಳೆ. ಅಚಾನಕ್, ಸೆರಗು ಜಾರಿದೆ. ನೀವು "ಚೆನ್ನಾಗಿದೆ" ಎಂದು ನಾಲಗೆ ಚಪ್ಪರಿಸಿಕೊಂಡು ತಲೆ ಬಗ್ಗಿಸಿ ಊಟ ಮಾಡುತ್ತೀರಿ. ಚೆನ್ನಾಗಿದ್ದದ್ದು ಊಟವೋ ಅಥವಾ...

  • ಬಸ್ಸಿನಲ್ಲಿ ಕುಳಿತಾಕೆ ಸೆಖೆಯೆಂದು ತುಸುವೇ ಸೆರಗು ಸರಿಸಿ ಗಾಳಿ ಹಾಕಿಕೊಳ್ಳುತ್ತಿದ್ದರೆ, ನಿಮಗೆ ತಂಪೋ ಬಿಸಿಯೋ?
ಇರಲಿ, ಮತ್ತಷ್ಟು ಪ್ರಶ್ನೆ ಕೇಳಿ ನಿಮ್ಮ ತಲೆ ತಿನ್ನುವುದಿಲ್ಲ. ಪರದೆ ಎತ್ತಿದರೆ ಶುರುವಾಗುವುದು ಆಟ. ಸೆರಗು ಸರಿದರೆ ಶುರುವಾಗುವುದು ದೊಡ್ಡಾಟ; ಜಗತ್ತಿನ ಅತಿ ಜನಪ್ರಿಯ ಆಟ!

ಅಂದ ಹಾಗೆ, ಈ ಬರಹ woman centred ಅನ್ನಿಸಿದರೆ ನನ್ನ ತಪ್ಪೇನಿಲ್ಲ, ಅದು ನನಗೆ ಸಹಜ ಕೂಡ. ಆದರೆ ಈ ಬ್ಲಾಗಿಗೆ ಮಹಿಳೆಯರಿಗೆ ಸಂಪೂರ್ಣ ಸ್ವಾಗತ, ಓದಲು, ಬರೆಯಲೂ ಕೂಡ. ಬನ್ನಿ, ಪುರುಷರ ಲೋಕದಲ್ಲೊಂದು ಇಣುಕು ಹಾಕಿ, ಹಾಗೇ ನಿಮ್ಮ ಲೋಕದೊಳಗೊಂದು ಇಣುಕನ್ನು ನಮಗೂ ಕೊಡಿ

ಸೆರಗು ಜಾರಿದ ಮೇಲೆ ಮತ್ತೇನೇನು ಜಾರಬಹುದೆಂದು ನೋಡೋಣಲ್ಲ?